ರಾಜ್ಯ ಹಣಕಾಸು ಸಮಿತಿ:
1. ರಾಜ್ಯ ಹಣಕಾಸು, ಲೆಕ್ಕಪತ್ರ, ತೆರಿಗೆ ಇತ್ಯಾದಿಗಳಲ್ಲಿ ಪರಿಣತಿಯನ್ನು ಹೊಂದಿರುವ ಐದು ಸದಸ್ಯರನ್ನು ರಾಜ್ಯ ಕಾರ್ಯಕಾರಿ ಸಮಿತಿಯ ಪರಾಮರ್ಶೆಯೊಂದಿಗೆ ರಾಜ್ಯ ಮುಖ್ಯ ಆಯುಕ್ತರು ರಾಜ್ಯ ಹಣಕಾಸು ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡುತ್ತಾರೆ.
2. ರಾಜ್ಯ ಖಜಾಂಚಿಯವರು ಅಧ್ಯಕ್ಷರಾಗಿ ಮತ್ತು ರಾಜ್ಯ ಕಾರ್ಯದರ್ಶಿಯವರು ರಾಜ್ಯ ಹಣಕಾಸು ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
3. ರಾಜ್ಯ ಹಣಕಾಸು ಸಮಿತಿಯ ಕಾರ್ಯವೆಂದರೆ ನಿಧಿಗಳನ್ನು ಸಂಗ್ರಹಿಸುವುದು, ಬಜೆಟ್, ವಾರ್ಷಿಕ ಲೆಕ್ಕಪತ್ರ ಹಾಗೂ ಬ್ಯಾಲೆನ್ಸ್ ಶೀಟ್ ಮತ್ತು ಇತರ ಹಣಕಾಸು ಸಂಬಂಧಿತ ವಿಷಯಗಳನ್ನು ಪರಿಶೀಲಿಸಿ ರೂಪಿಸಲು ಹಾಗೂ ಈ ಎಲ್ಲಾ ವಿಷಯಗಳನ್ನು ರಾಜ್ಯ ಮುಖ್ಯ ಆಯುಕ್ತರ ಮೂಲಕ ರಾಜ್ಯ ಕಾರ್ಯಕಾರಿ ಸಮಿತಿಯ ಮುಂದಿಡಲು ಸಿದ್ಧಪಡಿಸುವುದು.
ಕಾಪಿರೈಟ್ © 2024 ಎಲ್ಲಾ ಹಕ್ಕುಗಳು ಉಳಿಸಿಕೊಳ್ಳಲಾಗಿದೆ | ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ.