ರಾಜ್ಯ ಕಾರ್ಯಕ್ರಮ ಸಮಿತಿ:
1. ಅನುಭವದಲ್ಲಿ ಹಿರಿಯರಾಗಿರುವ ಸಂಬಂಧಿತ ರಾಜ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಉಭಯ ಶಾಖೆಗಳ ರಾಜ್ಯ ಕಾರ್ಯಕ್ರಮ ಸಮಿತಿ ಇರಲಿದೆ. ಎಲ್ಲಾ ರಾಜ್ಯ ಸಂಘಟನಾ ಆಯುಕ್ತರು (SOCs), ಸಹಾಯಕರಾದ ರಾಜ್ಯ ಸಂಘಟನಾ ಆಯುಕ್ತರು (JT. SOCs, ASOCs), ಜಿಲ್ಲಾ ಸಂಘಟನಾ ಆಯುಕ್ತರು (DOCs) ಹಾಗೂ ರಾಜ್ಯ ಯುವ ಸಮಿತಿಯಿಂದ ರಾಜ್ಯ ಮುಖ್ಯ ಆಯುಕ್ತರು ನೇಮಕ ಮಾಡುವ ಇಬ್ಬರು ಯುವ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ರಾಜ್ಯ ಸಂಘಟನಾ ಆಯುಕ್ತರು (ಅನುಭವದಲ್ಲಿ ಹಿರಿಯರು) ಸಮಿತಿಯ ಸಂಚಾಲಕರಾಗಿರುತ್ತಾರೆ.
2. ರಾಜ್ಯ ಕಾರ್ಯಕ್ರಮ ಸಮಿತಿ ಗುರಿ ಸಾಧನೆಯ ಆಧಾರದ ಮೇಲೆ ಕಾರ್ಯಕ್ರಮದ ಪರಿಶೀಲನೆಯನ್ನೂ ನಡೆಸಲಿದೆ.
3. ರಾಜ್ಯ ಕಾರ್ಯಕ್ರಮ ಸಮಿತಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಸಭೆ ನಡೆಸಿ ರಾಷ್ಟ್ರೀಯ ಗುರಿ ಹಾಗೂ ರಾಜ್ಯ ಗುರಿಯ ಆಧಾರದ ಮೇಲೆ ರಾಜ್ಯ ಸಂಘಟನೆಯ ಗುರಿಯನ್ನು ಮತ್ತು ಕಾರ್ಯಕ್ರಮವನ್ನು ತಯಾರಿಸುತ್ತದೆ. ಈ ಗುರಿಗಳನ್ನು ರಾಷ್ಟ್ರೀಯ/ರಾಜ್ಯ ಕಾರ್ಯಕಾರಿ ಸಮಿತಿಯಿಂದ ನಿರ್ಧರಿಸಲಾಗುವುದು.
ಕಾಪಿರೈಟ್ © 2024 ಎಲ್ಲಾ ಹಕ್ಕುಗಳು ಉಳಿಸಿಕೊಳ್ಳಲಾಗಿದೆ | ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ.